ರೈತ ಸಂಘ-ಹಸಿರುಸೇನೆ ತೊಗರಿಗೆ 7500 ಬೆಂಬಲ ಬೆಲೆ ನೀಡಲು ಮನವಿ | ಸಂಜೆವಾಣಿಗೆ ಸ್ವಾಗತ

ಜೇವರ್ಗಿ : ಈ ಭಾಗದ ಪ್ರಮುಖ ಬೆಳೆ ತೊಗರಿಗೆ 7500 ರೂ.ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಗ್ರೇಡ್-2 ತಹಶೀಲ್ದಾರ್ ಶರಣಬಸಪ್ಪ ಮುಡುಬಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಕಲಬುರಗಿ, ಬೀದರ, ಯಾದಗೀರ, ರಾಯಚೂರ ಜಿಲ್ಲೆಗಳಲ್ಲಿ ತೊಗರಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ 8 ಸಾವಿರ ಗಳಿಂದ 10 ಸಾವಿರ ರೂ.ಗಳವರೆಗೆ ಮಾರಾಟವಾಗಿದ್ದ ತೊಗರಿ ಬೆಲೆ ಇಂದು 4500 ರೂ ಗೆ ಕುಸಿದಿದೆ. ಇದರಿಂದಾಗಿ ತೊಗರಿ ಬೆಳೆಗಾರರು ತೀವೃ ಸಂಕಷ್ಟದಲ್ಲಿದ್ದಾರೆ. ಕಳೆದ ಎರಡು ವರ್ಷದ ಬೀಕರ ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ ಪರದಾಡುವಂತಾಗಿದೆ. ವಿಳಂಭ ಮಾಡದೇ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ ತೊಗರಿಗೆ 7500 ರೂ. ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಮಾಡಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘÀದ ಜಿಲ್ಲಾಧ್ಯಕ್ಷ ಬಸ್ಸುಗೌಡ ಗಂವ್ಹಾರ, ಉಪಾಧ್ಯಕ್ಷ ಬಾಬುಗೌಡ ವಿಭೂತಿ ನೆಲೋಗಿ, ಪ್ರಧಾನ ಕಾರ್ಯದರ್ಶಿ ಅಲ್ಲಾಪಟೇಲ ಮಾಲಿಬಿರಾದಾರ ಇಜೇರಿ, ಮಲ್ಲಮ್ಮ ಕೊಬ್ಬಿನ್, ಸೈಯದ್ ಗೌಸ್ ಖಾದ್ರಿ, ಭೀಮರೆಡ್ಡಿ ಮಾರಡಗಿ, ಮಲ್ಲಿಕಾರ್ಜುನ ಫರಹತಾಬಾದ, ಮಹ್ಮದ್‍ಸಾಬ ಮಡಕಿ, ದೇವಿಂದ್ರಪ್ಪ ಪೂಜಾರಿ, ಸೈಯದ್‍ಸಾಬ ಇಜೇರಿ, ಮಂಜೂರ ಪಟೇಲ, ಶಿವಶರಣಪ್ಪಗೌಡ ಗುಗಿಹಾಳ, ಮೋಹನಗೌಡ ಗಂವ್ಹಾರ, ಭೀಮರಾಯ ಮಾರಡಗಿ, ಶಾಂತಕುಮಾರ, ದೇವಿಂದ್ರ ಪಾಟೀಲ ಸೇರಿದಂತೆ ಮತ್ತೀತರರು ಇದ್ದರು.

Source: ರೈತ ಸಂಘ-ಹಸಿರುಸೇನೆ ತೊಗರಿಗೆ 7500 ಬೆಂಬಲ ಬೆಲೆ ನೀಡಲು ಮನವಿ | ಸಂಜೆವಾಣಿಗೆ ಸ್ವಾಗತ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s