Tag Archives: Chikkabalapur

ಸಂಸದ ಮೊಯ್ಲಿ ನಿವಾಸದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಬಳ್ಳಾಪುರ: ಸಂಸದ ವೀರಪ್ಪ ಮೊಯ್ಲಿ ಗೃಹ ಕಚೇರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಇಂದು ಪ್ರತಿಭಟನೆ ನಡೆಸಿದರು.ನಗರದ ಸುಬ್ಬರಾಯನ ಪೇಟೆಯಲ್ಲಿನ ಗೃಹ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಬರಪೀಡಿತ ಕರ್ನಾಟಕಕ್ಕೆ ವಿಶೇಷ ಪ್ಯಾಕೆಜ್ ಹಾಗೂ ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ರು.ಸಂಸದ ಮೊಯ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿದಲ್ಲದೆ, ಈ ಬಗ್ಗೆ ಕೇಂದ್ರ ಸರ್ಕಾರವೂ ಗಂಭೀರವಾಗಿ ತೆಗೆದುಕೊಳ್ಳಬೇಕೆಂದರು.

Source: ಸಂಸದ ಮೊಯ್ಲಿ ನಿವಾಸದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

Advertisements

ಮರಳು ದಂಧೆಗೆ ಪೊಲೀಸರಿಂದ ಕುಮ್ಮಕ್ಕು: ನಾರಾಯಣಸ್ವಾಮಿ

ಚಿಕ್ಕಬಳ್ಳಾಪುರ: ತಾಲೂಕಿನ ಚೇಳೂರಿನಲ್ಲಿ ಮರಳು ಸಾಗಾಣಿಕೆ ಪೊಲೀಸರ ಸಮ್ಮುಖದಲ್ಲಿ ನಡೆಯುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ವಿ.ನಾರಾಯಣಸ್ವಾಮಿ ಆರೋಪಿಸಿದ್ದಾರೆ.ಅವರು ಇಂದು ನಗರದ ಪತ್ರಕರ್ತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ತಿಂಗಳಿನಿಂದ ಮರಳು ದಂಧೆ ವಿಷಯ ಕುರಿತು ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಮರಳಿನ ವಾಹನಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಮೇಲಿನ ಅಧಿಕಾರಿಗಳಿಗೆ ಹೇಳಿ ಎಂದು ಪ್ರತಿ ಉತ್ತರ ನೀಡುತ್ತಾರೆ. ಇಂತಹ ವ್ಯವಸ್ಥಿತ ಮರಳು ದಂಧೆಯ ಜಾಲದಲ್ಲಿ ಅಧಿಕಾರಿಗಳ ಕೈವಾಡವಿದ್ದು ಈ ಭಾಗದ ಜನರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಈ ಸಮಯದಲ್ಲಿ ಚೇಳೂರಿನ ಹೋಬಳಿ ಅಧ್ಯಕ್ಷ ವಿ.ನರಸಿಂಹಪ್ಪ, ಸಂಘದ ಕೆ.ಎನ್.ಮಧುಸೂದನ್‍ರೆಡ್ಡಿ, ವಿ.ಎನ್.ಶಂಕರಪ್ಪ, ಚಿಕ್ಕರಾಮಪ್ಪ, ಆಂಜಿನೇಯರೆಡ್ಡಿ ಚೆನ್ನರೆಡ್ಡಿ ಕೆ.ವಿ.ವೆಂಕಟರೋಣಪ್ಪ, ಉಪಸ್ಥಿತರಿದ್ದರು.

Source: ಮರಳು ದಂಧೆಗೆ ಪೊಲೀಸರಿಂದ ಕುಮ್ಮಕ್ಕು: ನಾರಾಯಣಸ್ವಾಮಿ

Save