Tag Archives: Compensation

Delayed land compensation dominates Master Plan meet- The New Indian Express

Lashing out at the civic agency for not paying compensation to farmers whose lands were acquired for the Peripheral Ring Road project, P Nagaraj, ex-chairman of Kogilu Gram Panchayat, said, “Many of them are today living in abject poverty. Farmers are unable to marry off their daughters as BDA has not given them any money.” Sharing his personal experience, Nagaraj said that 3.5 acres of his land were taken away by BDA in connection with the notification issued for the PRR project in 2004. “It is 12 years now. I must be given Rs 17.5 crores and I have not got a single rupee so far.”The leader of the Yelahanka unit of the Karnataka Rajya Raitha Sangha B G Nanjundappa seconded him and demanded speedy compensation to farmers whose lands were taken away for the PRR project.However, the No Objection Certificates have not yet been issued to the landowners by the BDA.

Source: Delayed land compensation dominates Master Plan meet- The New Indian Express

Advertisements

ಸಾಲ ಮನ್ನಾ ಮಾಡುವಂತೆ ಸಂಸದ ಪ್ರತಾಪ್‌ ಸಿಂಹ ಕಚೇರಿ ಎದುರು ರೈತರ ಪ್ರತಿಭಟನೆ

ಮೈಸೂರು: ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಸಂಸದ ಪ್ರತಾಪ ಸಿಂಹ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆ ರೈತರಿಂದ ಪ್ರತಿಭಟನೆ ನಡೆಸಲಾಯಿತು.ಕಳೆದು ಎರಡು ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಬರಗಾಲದಿಂದ ಕಂಗೆಟ್ಟಿರುವ ರೈತರು ಬೆಳೆನಷ್ಟ ಹಾಗೂ ಸಾಲಕ್ಕೆ ಹೆದರಿ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇದನ್ನು ತಪ್ಪಿಸಲು ಕೇಂದ್ರ ಹಾಗೂ ರಾಜ್ಯ¸ ಸರ್ಕಾರ ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು.ಖಾಸಗಿ ಕಂಪನಿಗಳಿಗೆ ಉದಾರತೆ ತೋರಿ ಸಾಲ ಮನ್ನಾ ಮಾಡುವ ಪ್ರಧಾನಿ ಮೋದಿ, ದೇಶದ ಬೆನ್ನೆಲುಬಾದ ರೈತರ ಬಗ್ಗೆ ಕಾಳಜಿ ತೋರಲು ಮನಸ್ಸು ಮಾಡುತ್ತಿಲ್ಲ. ರೈತರ ಬಗ್ಗೆ ಮಾತನಾಡುವ ಪ್ರಧಾನಿ ರೈತರ ಕಷ್ಟ ಅರಿಯಬೇಕಿದೆ ಎಂದು ಕಿಡಿಕಾರಿದರು.ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಪ್ರತಾಪ್ ಸಿಂಹ, ಬೆಂಗಳೂರಿನಲ್ಲಿ ಸ್ಟೀಲ್ ಬ್ರಿಡ್ಜ್ ಮಾಡಲು ಉತ್ಸುಕವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ರೈತರ ಪರ ಕಾಳಜಿ ವಹಿಸುತ್ತಿಲ್ಲ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ. ಕೇಂದ್ರದ ಮೇಲೆ ಒತ್ತಡ ತಂದು ನಾವು ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದರು.

Source: ಸಾಲ ಮನ್ನಾ ಮಾಡುವಂತೆ ಸಂಸದ ಪ್ರತಾಪ್‌ ಸಿಂಹ ಕಚೇರಿ ಎದುರು ರೈತರ ಪ್ರತಿಭಟನೆ

ಸಂಸದ ಮೊಯ್ಲಿ ನಿವಾಸದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

ಚಿಕ್ಕಬಳ್ಳಾಪುರ: ಸಂಸದ ವೀರಪ್ಪ ಮೊಯ್ಲಿ ಗೃಹ ಕಚೇರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಮುತ್ತಿಗೆ ಹಾಕಿ ಇಂದು ಪ್ರತಿಭಟನೆ ನಡೆಸಿದರು.ನಗರದ ಸುಬ್ಬರಾಯನ ಪೇಟೆಯಲ್ಲಿನ ಗೃಹ ಕಚೇರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಬರಪೀಡಿತ ಕರ್ನಾಟಕಕ್ಕೆ ವಿಶೇಷ ಪ್ಯಾಕೆಜ್ ಹಾಗೂ ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದ್ರು.ಸಂಸದ ಮೊಯ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿದಲ್ಲದೆ, ಈ ಬಗ್ಗೆ ಕೇಂದ್ರ ಸರ್ಕಾರವೂ ಗಂಭೀರವಾಗಿ ತೆಗೆದುಕೊಳ್ಳಬೇಕೆಂದರು.

Source: ಸಂಸದ ಮೊಯ್ಲಿ ನಿವಾಸದ ಎದುರು ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳಿನಿಂದ ಬೆಳೆ ಹಾನಿ  ಸೂಕ್ತ ಪರಿಹಾರಕ್ಕೆ ರಾಜ್ಯ ರೈತ ಸಂಘ ಆಗ್ರಹ | ಸಂಜೆವಾಣಿಗೆ ಸ್ವಾಗತ

ಬಳ್ಳಾರಿ, ಜ.8: ಬಳ್ಳಾರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸ್ಥಾಪಿತಗೊಂಡಿರುವ ಕೆಲ ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳು ಮತ್ತು ಹೊಲಸಿನಿಂದಾಗಿ ರೈತರು ಬೆಳೆದ ಬೆಳೆಗೆ ಹಾನಿಯಾಗುತ್ತಿದ್ದು ಬೆಳೆ ಹಾನಿಗೊಳಗಾಗುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಹಾಗೂ ಗ್ರಾಮದ ಯುವಕರು, ಜಿಲ್ಲಾಧಿಕಾರಿ ಈ ಬಗ್ಗೆ ಕೂಡಲೇ ಗಮನ ಹರಿಸಿ ಕಾರ್ಖಾನೆಗಳ ಮಾಲೀಕರು ರೈತ ಸಂಘದ ಪ್ರತಿನಿಧಿಗಳ ಜೊತೆ ಸಭೆ ಕರೆಯುವಂತೆ ಕೋರಿದ್ದಾರೆ.ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಮತ್ತು ಇತರರು ಇಂದು ಬಳ್ಳಾರಿಯ ಸುದ್ದಿ-ಮಾಧ್ಯಮಗಳ ಪ್ರತಿನಿಧಿಗಳನ್ನು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಮತ್ತು ಕಾರ್ಖಾನೆಗಳಿರುವ ಸ್ಥಳಗಳಿಗೆ ಕರೆದುಕೊಂಡು ಹೋಗಿ, ಪರಿಸ್ಥಿತಿಯನ್ನು ವಿವರಿಸಿದರಲ್ಲದೇ ಈ ಕಾರ್ಖಾನೆಗಳಿಂದ ಹೊರ ಬೀಳುವ ಧೂಳು, ಹೊಲಸಿನಿಂದಾಗಿ ಉಂಟಾಗುತ್ತಿರುವ ಪರಿಸರ ಮಾಲಿನ್ಯ, ಕೃಷಿ ಹಾನಿ, ಬೆಳೆ ನಷ್ಟದ ಬಗ್ಗೆ ರಾಜ್ಯ ಸರ್ಕಾರ, ಜಿಲ್ಲಾ ಆಡಳಿತವು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Source: ಕಾರ್ಖಾನೆಗಳಿಂದ ಹೊರಹೊಮ್ಮುವ ಧೂಳಿನಿಂದ ಬೆಳೆ ಹಾನಿ  ಸೂಕ್ತ ಪರಿಹಾರಕ್ಕೆ ರಾಜ್ಯ ರೈತ ಸಂಘ ಆಗ್ರಹ | ಸಂಜೆವಾಣಿಗೆ ಸ್ವಾಗತ

Farmers oppose flyover project – The Hindu

The Karnataka Rajya Raitha Sangha and Green Brigade (KRRS) has urged the BDA to settle the compensation to farmers whose lands were notified in 2005 for the Peripheral Ring Road project before starting on the steel flyover. KRRS accused the BDA of neglecting the 65-km PRR project at the cost of the steel flyover.

Source: Farmers oppose flyover project – The Hindu