Tag Archives: Tur Dal

ರೈತ ಸಂಘ-ಹಸಿರುಸೇನೆ ತೊಗರಿಗೆ 7500 ಬೆಂಬಲ ಬೆಲೆ ನೀಡಲು ಮನವಿ | ಸಂಜೆವಾಣಿಗೆ ಸ್ವಾಗತ

ಜೇವರ್ಗಿ : ಈ ಭಾಗದ ಪ್ರಮುಖ ಬೆಳೆ ತೊಗರಿಗೆ 7500 ರೂ.ಬೆಂಬಲ ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ವತಿಯಿಂದ ಗ್ರೇಡ್-2 ತಹಶೀಲ್ದಾರ್ ಶರಣಬಸಪ್ಪ ಮುಡುಬಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಕಲಬುರಗಿ, ಬೀದರ, ಯಾದಗೀರ, ರಾಯಚೂರ ಜಿಲ್ಲೆಗಳಲ್ಲಿ ತೊಗರಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ 8 ಸಾವಿರ ಗಳಿಂದ 10 ಸಾವಿರ ರೂ.ಗಳವರೆಗೆ ಮಾರಾಟವಾಗಿದ್ದ ತೊಗರಿ ಬೆಲೆ ಇಂದು 4500 ರೂ ಗೆ ಕುಸಿದಿದೆ. ಇದರಿಂದಾಗಿ ತೊಗರಿ ಬೆಳೆಗಾರರು ತೀವೃ ಸಂಕಷ್ಟದಲ್ಲಿದ್ದಾರೆ. ಕಳೆದ ಎರಡು ವರ್ಷದ ಬೀಕರ ಬರಗಾಲದಿಂದ ಕಷ್ಟದಲ್ಲಿರುವ ರೈತರಿಗೆ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ ಪರದಾಡುವಂತಾಗಿದೆ. ವಿಳಂಭ ಮಾಡದೇ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‍ಗೆ ತೊಗರಿಗೆ 7500 ರೂ. ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಮಾಡಬೇಕು ಎಂದು ಮನವಿ ಪತ್ರದ ಮೂಲಕ ಒತ್ತಾಯಿಸಿದರು.ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘÀದ ಜಿಲ್ಲಾಧ್ಯಕ್ಷ ಬಸ್ಸುಗೌಡ ಗಂವ್ಹಾರ, ಉಪಾಧ್ಯಕ್ಷ ಬಾಬುಗೌಡ ವಿಭೂತಿ ನೆಲೋಗಿ, ಪ್ರಧಾನ ಕಾರ್ಯದರ್ಶಿ ಅಲ್ಲಾಪಟೇಲ ಮಾಲಿಬಿರಾದಾರ ಇಜೇರಿ, ಮಲ್ಲಮ್ಮ ಕೊಬ್ಬಿನ್, ಸೈಯದ್ ಗೌಸ್ ಖಾದ್ರಿ, ಭೀಮರೆಡ್ಡಿ ಮಾರಡಗಿ, ಮಲ್ಲಿಕಾರ್ಜುನ ಫರಹತಾಬಾದ, ಮಹ್ಮದ್‍ಸಾಬ ಮಡಕಿ, ದೇವಿಂದ್ರಪ್ಪ ಪೂಜಾರಿ, ಸೈಯದ್‍ಸಾಬ ಇಜೇರಿ, ಮಂಜೂರ ಪಟೇಲ, ಶಿವಶರಣಪ್ಪಗೌಡ ಗುಗಿಹಾಳ, ಮೋಹನಗೌಡ ಗಂವ್ಹಾರ, ಭೀಮರಾಯ ಮಾರಡಗಿ, ಶಾಂತಕುಮಾರ, ದೇವಿಂದ್ರ ಪಾಟೀಲ ಸೇರಿದಂತೆ ಮತ್ತೀತರರು ಇದ್ದರು.

Source: ರೈತ ಸಂಘ-ಹಸಿರುಸೇನೆ ತೊಗರಿಗೆ 7500 ಬೆಂಬಲ ಬೆಲೆ ನೀಡಲು ಮನವಿ | ಸಂಜೆವಾಣಿಗೆ ಸ್ವಾಗತ

Advertisements

ತೊಗರಿ ಬೆಳೆಯ  ಖರೀದಿ ಕೇಂದ್ರ ತೆರೆಯಲು ರೈತ ಸಂಘ ಆಗ್ರಹ | ಸಂಜೆವಾಣಿಗೆ ಸ್ವಾಗತ

ಬಳ್ಳಾರಿ, ಜ.18:ರಾಜ್ಯ ಸರ್ಕಾರವು ತೊಗರಿ ಬೆಳೆ ಧಾನ್ಯಕ್ಕೆ ಸೂಕ್ತ, ನ್ಯಾಯೋಚಿತ ಬೆಂಬಲ ನೀಡಬೇಕು ಹಾಗೂ ತೊಗರಿ ಬೆಳೆ ಖರೀದಿ ಕೇಂದ್ರವನ್ನು ಬಳ್ಳಾರಿ ಜಿಲ್ಲೆಯಲ್ಲಿ ತೆರೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಒತ್ತಾಯಿಸಿದೆ.ರಾಜ್ಯ ರೈತ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಅವರ ನೇತೃತ್ವದಲ್ಲಿಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಛೇರಿಗೆ ನಿಯೋಗದಲ್ಲಿ ತೆರಳಿ ಮನವಿ ಪತ್ರ ಸಲ್ಲಿಸಿದ ಪದಾಧಿಕಾರಿಗಳು, ರೈತರು ಬಳ್ಳಾರಿ ನಗರ ಮತ್ತು ಜಿಲ್ಲೆಯಲ್ಲಿ ತೊಗರಿ ಬೆಳೆ ಖರೀದಿ ಕೇಂದ್ರವನ್ನು ತೆರೆಯುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.ರಾಜ್ಯ ಸರ್ಕಾರವು ತೊಗರಿ ಬೆಳೆಯನ್ನು ಬೆಳೆದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಆದೇಶಿಸಿದೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೂ ಖರೀದಿ ಕೇಂದ್ರವನ್ನು ತೆರೆಯದೇ ರೈತರಿಗೆ ಅನ್ಯಾಯ ಮಾಡಲಾಗಿದೆ, ಜಿಲ್ಲಾ ಆಡಳಿತವು ಈ ಬಗ್ಗೆ ಕೂಡಲೇ ಗಮನ ಹರಿಸಿ, ಖರೀದಿ ಕೇಂದ್ರ ತೆರೆಯಬೇಕು, ತನ್ಮೂಲಕ ತೊಗರಿ ಬೆಳೆದ ರೈತರ ನೆರವಿಗೆ ಮುಂದಾಗುವಂತೆ ರೈತ ಸಂಘ ಕೋರಿದೆ.ದರೂರು ಪುರುಷೋತ್ತಮಗೌಡ ಸೇರಿದಂತೆ ಎಸ್.ಕೆ.ದೊಡ್ಡದಾಸಪ್ಪ, ಕೆ.ಎಸ್.ಜಡೆಪ್ಪ, ಜಿ.ಶಿವಶಂಕರರೆಡ್ಡಿ, ಎಸ್.ಕೆ.ಈಶ್ವರಪ್ಪ, ಕೆ.ಭೀಮ ಮತ್ತು ಇತರರು ಮನವಿ ಪತ್ರ ಸಲ್ಲಿಸಿದ್ದಾರೆ.

Source: ತೊಗರಿ ಬೆಳೆಯ  ಖರೀದಿ ಕೇಂದ್ರ ತೆರೆಯಲು ರೈತ ಸಂಘ ಆಗ್ರಹ | ಸಂಜೆವಾಣಿಗೆ ಸ್ವಾಗತ

As prices head south, tur dal farmers seek Centre’s support | Business Line

At present, Tur market arrivals in Kalaburagi are mainly from the neighbouring district of Vijayapura, where production of Tur has caught up in recent years with farmers shifting to pulses.Besides a bigger crop, the prevailing cash shortage could also exert pressure on farmers to sell their produce immediately after the harvest, growers said. Farmers have planted a record acreage under Tur this year, raising expectations of a bumper harvest.“One of the main reasons for the price fall is the massive imports that the Centre and traders have contracted from various countries. In a bid to protect domestic growers from the price fall, the Centre should immediately start procurement,” said Chamaras Malipatil, State President of the Karnataka Rajya Raitha Sangha.To keep prices under check, the Centre earlier this year had allowed imports at zero duty and approved creation of a buffer of 20 lakh tonnes for market intervention.

Source: As prices head south, tur dal farmers seek Centre’s support | Business Line

Save